ಉಳ್ಳಾಲ ಹೈದ್ರೋಸ್ ನಿಧನ ಹಿನ್ನೆಲೆ ದೇವಸ್ಥಾನ ಕಾರ್ಯಕ್ರಮ ಸ್ಥಗಿತ: ‘ಮಾನವೀಯತೆಯೇ ಮಹಾಧರ್ಮ’ ಎಂದು ಯು.ಟಿ. ಖಾದರ್ ಶ್ಲಾಘನೆ
ಉಳ್ಳಾಲ ಹೈದ್ರೋಸ್ ಅವರ ನಿಧನದ ಸಂದರ್ಭದಲ್ಲಿ ಅವರ ಕುಟುಂಬದ ದುಃಖಕ್ಕೆ ಸ್ಪಂದಿಸಿ, ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ದೇವಸ್ಥಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ‘ಮಾನವೀಯತೆಯೇ ದೊಡ್ಡ ಧರ್ಮ’ ಎಂಬ ಮಹತ್ವದ ಸಂದೇಶವನ್ನು ಸಮಾಜಕ್ಕೆ ನೀಡಿದೆ.
ಉಳ್ಳಾಲದ ಬಂಡಿಕೋಟ್ಯದಲ್ಲಿ ನಡೆದ ಈ ಘಟನೆ ನನ್ನ ಮನಸ್ಸಿಗೆ ಆಳವಾಗಿ ಸ್ಪರ್ಶಿಸಿದೆ. ಬಂದಿಕೋಟೆಯ ಜನರು ತಮ್ಮ ನಡೆ ಮೂಲಕ ಮಾನವೀಯತೆಯೇ ಎಲ್ಲಕ್ಕಿಂತ ಶ್ರೇಷ್ಠವೆಂಬುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ದೇವಸ್ಥಾನ ಸಮಿತಿ, ಭಕ್ತರು ಹಾಗೂ ಸ್ಥಳೀಯ ನಿವಾಸಿಗಳ ಈ ಮಾನವೀಯ ನಿರ್ಧಾರ ನಿಜಕ್ಕೂ ಶ್ಲಾಘನೀಯವಾಗಿದೆ.
ಇದು ಕೇವಲ ಒಂದು ಘಟನೆ ಮಾತ್ರವಲ್ಲ; ಉಳ್ಳಾಲದ ಮಣ್ಣಿನ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಸಂಸ್ಕೃತಿಗೆ ಇದು ಜೀವಂತ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಉಳ್ಳಾಲದ ಸೌಹಾರ್ದತೆಯ ಪರಂಪರೆಯನ್ನು ಇನ್ನಷ್ಟು ಬಲಪಡಿಸುತ್ತವೆ.
ಬಂಡಿಕೋಟ್ಯದ ಎಲ್ಲಾ ನಿವಾಸಿಗಳು, ದೇವಸ್ಥಾನ ಸಮಿತಿ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ನಮ್ಮ ಸಮಾಜಕ್ಕೆ ಸದಾ ಮಾದರಿಯಾಗಿರಲಿ.
— ಯು.ಟಿ. ಖಾದರ್
ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ
ಹಾಗೂ ಶಾಸಕರು, ಉಳ್ಳಾಲ ವಿಧಾನಸಭಾ ಕ್ಷೇತ್ರ
What's Your Reaction?
Like
3
Dislike
0
Love
0
Funny
0
Angry
0
Sad
0
Wow
1

