ನೀಟ್ ಪರೀಕ್ಷೆ ರದ್ದು: 22.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ – ಸಫ್ವಾನ್ ಕೆರೆಬೈಲ್ ಆಕ್ರೋಶ

May 12, 2026 - 23:20
 0  148
ನೀಟ್ ಪರೀಕ್ಷೆ ರದ್ದು: 22.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ – ಸಫ್ವಾನ್ ಕೆರೆಬೈಲ್ ಆಕ್ರೋಶ
Safwan Kerebail

National Eligibility cum Entrance Test (ನೀಟ್) ಪರೀಕ್ಷೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಹೊತ್ತಿರುವ ಮಹತ್ವದ ಪರೀಕ್ಷೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಪರೀಕ್ಷೆ ರದ್ದುಪಡಿಸಿರುವುದು ವಿದ್ಯಾರ್ಥಿಗಳ ಮನಸ್ಸಿಗೆ ಭಾರೀ ನೋವು ತಂದಿದೆ.


ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿದ್ಯಾರ್ಥಿ ಸಂಘದ ಅಧ್ಯಕ್ಷ *ಸಫ್ವಾನ್ ಕೆರೆಬೈಲ್* ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “22.5 ಲಕ್ಷ ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಪಟ್ಟು ವೈದ್ಯರಾಗುವ ಕನಸಿಗಾಗಿ ಓದುತ್ತಿದ್ದರು. ಅನೇಕ ಕುಟುಂಬಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಆದರೆ ಕೆಲವರ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಕಾರಣ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಕನಸುಗಳು ಇಂದು ಅಲುಗಾಡುತ್ತಿವೆ,” ಎಂದು ಹೇಳಿದ್ದಾರೆ.


“ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅದರ ಬದಲು ಮತ್ತೆ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಮಾನಸಿಕ ಒತ್ತಡ ಹಾಕಲಾಗುತ್ತಿದೆ. ವಿದ್ಯಾರ್ಥಿಗಳ ಕಣ್ಣೀರು ಮತ್ತು ಪರಿಶ್ರಮದ ಬೆಲೆ ಸರ್ಕಾರ ಅರಿತುಕೊಳ್ಳಬೇಕು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಪರೀಕ್ಷೆ ರದ್ದು ಸುದ್ದಿಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರೀ ನಿರಾಶೆ ಮನೆ ಮಾಡಿದೆ. ತಿಂಗಳುಗಳ ಕಾಲ ಮಾಡಿದ ಪರಿಶ್ರಮ, ನಿದ್ದೆ ಬಿಟ್ಟು ಓದಿದ ರಾತ್ರಿ, ಕುಟುಂಬದ ನಿರೀಕ್ಷೆಗಳು— ಒಂದೇ ಕ್ಷಣದಲ್ಲಿ ಕುಸಿದಂತಾಗಿದೆ. ಅನೇಕ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದು, ಸರ್ಕಾರ ನ್ಯಾಯಸಮ್ಮತ ಮತ್ತು ವಿದ್ಯಾರ್ಥಿ ಪರ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.


“ದೇಶದ ಭವಿಷ್ಯವಾಗಿರುವ ಯುವಕರ ವಿಶ್ವಾಸ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ವಿದ್ಯಾರ್ಥಿಗಳ ಕನಸುಗಳ ಜೊತೆ ಆಟ ನಡೆಯಬಾರದು,” ಎಂದು *ಸಫ್ವಾನ್ ಕೆರೆಬೈಲ್ ತಿಳಿಸಿದ್ದಾರೆ*.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0