ಎಸ್‌ಐಆರ್ ಕಾರ್ಯಕ್ಕೆ ವೇಗ: 10 ಹಾಗೂ 25ನೇ ವಾರ್ಡ್ ಬೂತ್‌ಗಳಲ್ಲಿ ಬಿಎಲ್‌ಎಗಳ ಸಹಕಾರ
ಎಸ್‌ಐಆರ್ (SIR) ಅಭಿಯಾನದ ಅಂಗವಾಗಿ 10ನೇ ವಾರ್ಡ್‌ನ ಬೂತ್‌ನಲ್ಲಿ ಬಿಎಲ್‌ಒ ಸುಜಯ್ ಅವರ ನೇತೃತ್ವದಲ್ಲಿ ಬಿಎಲ್‌ಎ ಮುಸ್ತಫಾ ಅಬ್ದುಲ್ಲಾ ಸಾರ್ವಜನಿಕರಿಗೆ ಎಸ್‌ಐಆರ್ ಫಾರ್ಮ್ ಭರ್ತಿ ಹಾಗೂ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ನಗರಸಭೆಯ ನಿಕಟಪೂರ ಸದಸ್ಯ ಜಬ್ಬಾರ್ ಮೇಲಂಗಡಿ ಕೂಡ ಉಪಸ್ಥಿತರಿದ್ದು ಕಾರ್ಯಕ್ಕೆ ಬೆಂಬಲ ನೀಡಿದರು.
ಅದೇ ರೀತಿ 25ನೇ ವಾರ್ಡ್‌ನ ಬೂತ್‌ನಲ್ಲಿ ಬಿಎಲ್‌ಒ ನಿರ್ಮಲಾ ಅವರೊಂದಿಗೆ ಬಿಎಲ್‌ಎ ಅಬ್ದುಲ್ ಮಲಿಕ್ ಮತ್ತು ಮೊಹಮ್ಮದ್ ಸಫ್ವಾನ್ ಮತದಾರರಿಗೆ ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ, ಫಾರ್ಮ್ ಭರ್ತಿ ಕಾರ್ಯದಲ್ಲಿ ಸಹಕರಿಸಿದರು.
