ನಮ್ಮೂರ ಧ್ವನಿಗೆ 7 ವರುಷ ತುಂಬಿದ ಸಂಭ್ರಮಾಚರಣೆ !
ಸಾವಿರಾರು ಮಂದಿಗೆ ಆಸರೆಯಾಗಿರುವ ನಾಡಿಗೆ ಬೆಳಕಾಗಿರುವ ಜನರ ಸಮಸ್ಯೆಗಳಿಗೆ ಧ್ವನಿಯಾಗಿರುವ ನಮ್ಮೂರ ಧ್ವನಿ ಸೇವಾ ಸಂಘ (ರಿ)ಕ್ಕೆ ಏಳು ವರುಷ ತುಂಬಿದ ಹರುಷದ ಸಮಯ.
ನಿಸ್ವಾರ್ಥ ಸೇವಕರ ತ್ಯಾಗಮಯ ಸೇವೆ ನಮ್ಮ ಶಕ್ತಿ. ನಾಡಿನ ಹಿರಿಯರ ಆಶೀರ್ವಾದ ನಮಗೆ ದಾರಿದೀಪ. ಜನಪ್ರತಿನಿಧಿಗಳ, ದಾನಿಗಳ, ಅಧಿಕಾರಿಗಳ, ಸರಕಾರದ ಸಹಕಾರ ನಮಗೆ ಹುರುಪು ನೀಡುತ್ತದೆ.
ಇನ್ನಷ್ಟು ದೊಡ್ಡ ಮಟ್ಟಿನ ಸಮಾಜ ಸೇವೆಯೊಂದಿಗೆ ನಮ್ಮೂರ ಧ್ವನಿಯು ಜನಮನ ತಲುಪಲಿದೆ. ನಾಡಿಗೆ ಸಂತಸವನ್ನು ನೀಡಲಿದೆ. ಸರ್ವರ ಸುರಕ್ಷತೆ, ಆರೋಗ್ಯ, ಮತ್ತು ನೆಮ್ಮದಿಯ ಗೌರವದ ಜೀವನ ನಮ್ಮ ಧ್ಯೇಯ.
ನಮ್ಮೂರ ಧ್ವನಿ ಸೇವಾ ಸಂಘ (ರಿ), ಅಳೇಕಲ – ಉಳ್ಳಾಲ.
