Header Banner
Header Banner

ವಿದ್ಯಾರ್ಥಿಗಳ ಪರ ಹೆಜ್ಜೆ ಹಾಕಿದ ಸಲೀಮ್ ಫರಂಗಿಪೇಟೆ: ನ್ಯಾಯದ ಹೋರಾಟಕ್ಕೆ ಹಿರಿಯರ ಬೆಂ

Share

Banner

ವಿದ್ಯಾರ್ಥಿಗಳ ಪರವಾಗಿ ನಿಂತ ಸಲೀಮ್ ಫರಂಗಿಪೇಟೆ.

Advertisement

ಇಂದು ಉಳ್ಳಾಲ ಅಬ್ಬಕ್ಕ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನೆಯಲ್ಲಿ ಒಂದು ಅಪರೂಪದ ದೃಶ್ಯ ಎಲ್ಲರ ಮನಸೆಳೆದಿತು. ಯುವ ವಿದ್ಯಾರ್ಥಿಗಳ ಹೋರಾಟದ ನಡುವೆ, ಅವರ ಪರವಾಗಿ ಹೆಜ್ಜೆ ಹಾಕಿದ ಒಬ್ಬ ಹಿರಿಮೆಯ ವ್ಯಕ್ತಿ ಕಾಣಿಸಿಕೊಂಡರು. ಅವರು ಬೇರೆ ಯಾರೂ ಅಲ್ಲ ಅನ್ಯಾಯದ ವಿರುದ್ಧ ತೊಡೆ ತಟ್ಟಿ ನಿಲ್ಲುವ ಧೈರ್ಯವಂತ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ಮೂಲಕ ಜನಮನ್ನಣೆ ಗಳಿಸಿದ
ಪಬ್ಲಿಕ್ ವಾಯ್ಸ್ ವಾಟ್ಸಾಪ್ ಗ್ರೂಪ್ ಅಡ್ಮಿನ್ ಸಲೀಮ್ ಫರಂಗಿಪೇಟೆ
ಇಂದಿನ ಕಾಲದಲ್ಲಿ ಹಲವರು ದೂರದಿಂದ ಬೆಂಬಲ ನೀಡುತ್ತಾರೆ, ಆದರೆ ಕೆಲವರು ಮಾತ್ರ ಜನರ ನಡುವೆ ನಿಂತು ತಮ್ಮ ಒಗ್ಗಟ್ಟನ್ನು ತೋರಿಸುತ್ತಾರೆ. ಆದರೆ ಉಳ್ಳಾಲದಲ್ಲಿ ವಿಧ್ಯಾರ್ಥಿಗಳ ಪರವಾಗಿ ನಡೆದ ಯಶಸ್ವಿ ಪ್ರತಿಭಟನೆಯಲ್ಲಿ ಪ್ರತ್ಯಕ್ಷವಾಗಿ ಆ ರೀತಿಯಲ್ಲಿ ವಿದ್ಯಾರ್ಥಿಗಳ ಪರವಾಗಿ ನಿಂತದ್ದು ನಿಜಕ್ಕೂ ಶ್ಲಾಘನೀಯ.ವಿದ್ಯಾರ್ಥಿಗಳ ನೋವು,ಜನರ ಧ್ವನಿ ಮತ್ತು ನ್ಯಾಯದ ಬೇಡಿಕೆಯನ್ನು ತಮ್ಮದೇ ವಿಷಯವೆಂದು ಕಂಡು ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಅವರ ಸಮಾಜಮುಖಿ ಮನಸ್ಸಿಗೆ ಸಾಕ್ಷಿಯಾಗಿದೆ.

ಹಿರಿಯರಾದರೂ ಅವರ ಉತ್ಸಾಹ ಯುವಕರಿಗಿಂತ ಕಡಿಮೆಯಿರಲಿಲ್ಲ. ಕೈಯಲ್ಲಿ ಜ್ಯೋತಿ ಹಿಡಿದು, ವಿದ್ಯಾರ್ಥಿಗಳ ಪರವಾಗಿ ನಿಂತಿರುವ ಅವರ ಚಿತ್ರ ನಿಜಕ್ಕೂ ಪ್ರೇರಣಾದಾಯಕ. ಇದು ಕೇವಲ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕ್ಷಣವಲ್ಲ; ಇದು ನ್ಯಾಯದ ಪರ ನಿಲ್ಲುವ ಧೈರ್ಯ,ಸಮಾಜದ ಮೇಲಿನ ಕಾಳಜಿ, ಮತ್ತು ಸತ್ಯದ ಜೊತೆ ಸಾಗುವ ನಿಲುವಿನ ಪ್ರತೀಕ.
ಸಲೀಮ್ ಫರಂಗಿಪೇಟೆ ಹಮೀದ್ ರಂತಹ ಹಿರಿಯರು ದೊಡ್ಡ ಶಕ್ತಿ. ಯುವಕರಿಗೆ ಧೈರ್ಯ ತುಂಬುವವರು, ಸಮಾಜದ ವಿಚಾರಗಳಲ್ಲಿ ಸ್ಪಂದಿಸುವವರು, ಜನರ ಕಷ್ಟಕ್ಕೆ ಜೊತೆಯಾಗುವವರು ನಿಜವಾದ ಲೆಜೆಂಡ್ಸ್.

ನ್ಯಾಯದ ಹೋರಾಟಕ್ಕೆ ವಯಸ್ಸು ಅಡ್ಡಿಯಲ್ಲ;
ಮನಸ್ಸು ಸತ್ಯದ ಜೊತೆಯಲ್ಲಿದ್ದರೆ ಸಾಕು — ಅದಕ್ಕೆ ಸಲೀಮ್ ಫರಂಗಿಪೇಟೆ ರವರು ಉತ್ತಮ ಉದಾಹರಣೆ.

ನಮ್ಮ ಹೆಮ್ಮೆಯ ಸಮಾಜಸೇವಕ ಸಲೀಮ್ ಫರಂಗಿಪೇಟೆ ಅವರಿಗೆ ಹೃದಯಪೂರ್ವಕ ಗೌರವಗಳು.

Read more

Latest News