ಉಳ್ಳಾಲ ನಗರಸಭೆ ವ್ಯಾಪ್ತಿಯ 12 ಹಾಗೂ 13ನೇ ವಾರ್ಡ್‌ಗಳಲ್ಲಿ ಎಸ್‌ಐಆರ್ (Special Intensive Revision) ಡಿಜಿಟೈಸೇಷನ್ ಕಾರ್ಯವು ಶೇ.98ರಷ್ಟು ಪೂರ್ಣಗೊಂಡಿದ್ದು, ಅಧಿಕಾರಿಗಳು ಹಾಗೂ ಬಿಎಲ್‌ಎಗಳ ಸಮನ್ವಯದ ಫಲವಾಗಿ ಕಾರ್ಯ ವೇಗವಾಗಿ ಸಾಗುತ್ತಿದೆ.
12ನೇ ವಾರ್ಡ್‌ನಲ್ಲಿ ಬಿಎಲ್‌ಒ ಲವೀನಾ ಕ್ರಾಸ್ತಾ, ಬಿಎಲ್‌ಎ ನವಾಝ್, ನಗರಸಭೆ ಸದಸ್ಯ ಇಸ್ಮಾಯಿಲ್, ಅಲಿ ಮೋನು ಉಳ್ಳಾಲ ಹಾಗೂ ಶಾನ್ ಫರ್ಹಾನ್ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡಿ ಡಿಜಿಟೈಸೇಷನ್ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಅದೇ ರೀತಿ 13ನೇ ವಾರ್ಡ್‌ನಲ್ಲಿ ಬಿಎಲ್‌ಒ ಮುಫೀದಾ ಹಾಗೂ ಬಿಎಲ್‌ಎ ಜಾಫರ್ ಅವರ ಸಹಯೋಗದಲ್ಲಿ ಎಸ್‌ಐಆರ್ ಡಿಜಿಟೈಸೇಷನ್ ಕಾರ್ಯವು ಶೇ.98ರಷ್ಟು ಪೂರ್ಣಗೊಂಡಿದ್ದು, ಮತದಾರರಿಗೆ ಅಗತ್ಯ ನೆರವು ಮತ್ತು ಮಾಹಿತಿ ಒದಗಿಸಲಾಯಿತು.
