ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಎನ್ ಎಸ್ ಯುಐ ಉಳ್ಳಾಲ ಘಟಕ ವತಿಯಿಂದ ಸೋಮವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

May 19, 2026 - 18:24
 0  44
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಎನ್ ಎಸ್ ಯುಐ ಉಳ್ಳಾಲ ಘಟಕ ವತಿಯಿಂದ ಸೋಮವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಕೇಂದ್ರ ಸರ್ಕಾರದ ವಿರುದ್ಧ ಎನ್‌ಎಸ್‌ಯುಐ ಪ್ರತಿಭಟನೆ
 ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಎನ್ ಎಸ್ ಯುಐ ಉಳ್ಳಾಲ ಘಟಕ ವತಿಯಿಂದ ಸೋಮವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾದಿಂದ ೨೨ ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಇದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಏಜೆನ್ಸಿ ನೇರ ಹೊಣೆಗಾರರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದುವರೆಗೆ ೪೦ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಇದರ ಹೊಣೆ ಹೊತ್ರು ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು. ಪ್ರಕರಣದ ತನಿಖೆಯಾಗಬೇಕು. ಇದರ ಹಿಂದಿರುವ ಕೋಚಿಂಗ್ ಸೆಂಟರ್ ಮಾಲೀಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


 ಉಳ್ಳಾಲ ವಿದಾನಸಭಾ ಕ್ಷೇತ್ರ ಎನ್‌ಎಸ್‌ಯುಐ ಅಧ್ಯಕ್ಷ ಸಾಹಿಲ್ ಮಂಚಿಲ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಈ ಬಿಜೆಪಿ ಸರಕಾರವನ್ನು ಮುತ್ತಿಗೆ ಹಾಕಲು ಎನ್.ಎಸ್.ಯು.ಊ ಸದಾ ನಿಲ್ಲುತ್ತದೆ, ಇದಾಗಲೇ ೨೨ ಲಕ್ಷ ವಿದ್ಯಾರ್ಥಿಗಳು ಕೇಂದ್ರ ಸರಕಾರದಿಂದ ಮೋಸಕ್ಕೆ ಒಳಗಾಗಿದ್ದಾರೆ ಎಂದರು.
ಶ್ರೇಯಾ ಮಾತನಾಡಿ ನಮಗೆ ಶಿಕ್ಷಣ ವ್ಯವಸ್ಥೆಯ ಮೇಲೆ ಹೆಮ್ಮೆ ಇತ್ತು , ಆದರೆ ಈಗ ನಾವು ಯಾರನ್ನು ದೂರುವುದು, ಈ ನೀಟ್ ಪರೀಕ್ಷೆಯ ಪೇಪರ್ ಸೋರಿಕೆಯಿಂದ ಎಷ್ಟೋ ಮಕ್ಕಳನ್ನು ಕಳೆದುಕೊಂಡಿದ್ದಾರೆ, ಅವರಿಗೆ ಹೇಗೆ ಸಾಂತ್ವನ ಹೇಳುತ್ತೀರಿ, ನಮಗೆ ಬೇಕಾಗಿರುವಿದು ನ್ಯಾಯ ಎಂದರು. ಎಂದರು.
ಉಳ್ಳಾಲ ಕ್ಷೇತ್ರ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಯು.ಟಿ.ಫರೀದ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ಕನಸಿನೊಂದಿಗೆ  ನೀಟ್ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಲವಾರು ವರ್ಷ ಶ್ರಮಪಡುತ್ತಾರೆ. ಇದನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ವೀರಪ್ಪ ಮೊಯ್ಲಿಯವರು ನೀಟ್ ವ್ಯವಸ್ಥೆ ಜಾರಿಗೆ ತಂದಿದ್ದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. 
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್,  ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಮುಖಂಡರಾದ ದಿನೇಶ್ ರೈ, ಅಮಿತಾ ಅಶ್ವಿನ್, ದಿನೇಶ್ ಕುಂಪಲ, ಆಲ್ವಿನ್ ಡಿಸೋಜ, ನವಾಝ್ ನರಿಂಗಾನ, ಫಿರೋಝ್ ಮಲಾರ್, ಆಶೀರ್ ಪೆರಿಮಾರ್, ಶೂಫುದ್ದೀನ್, ಇಳ್ಳಾಲ, ನೂವು, ವೀಶಾಲ್, ಮುಬಾರಕ್, ದರ್ಶನ್, ಜಾಸೀಂ,ಮುಸ್ತಫ, ಸವಾದ್,  ,ರಝಿಯಾ ಇಬ್ರಾಹಿಂ, ಝಕರಿಯ್ಯಾ ಮಲಾರ್, ಮುರಳೀಧರ ಶೆಟ್ಟಿ ಮೋರ್ಲ, ದಿನೇಶ್ ಮೂಳೂರು, ಬಾಸ್ಕರ್ ತೊಕ್ಕೋಟ್ಟು, ಸಫ್ವಾನ್ ಕೆರೆಬೈಲ್, ಝಿಯಾದ್ ಮುಕ್ಕಚ್ಚೇರಿ, ಸಫಿಯಾ, ರಹ್ಮತ್, ಮನ್ಸೂರ್ ಮಂಚಿಲ, ಫಿರೋಝ್ ಮಲಾರ್, ಇಕ್ಬಾಲ್ ಅಂಬ್ಲಮೊಗರು, ಸಾದಿಕ್ ಕಲ್ಲಾಪು, ರಶೀದ್ ಕೋಡಿ, ಮಿತೇಶ್ ಪೂಜಾರಿ, ತ್ವಾಹ ಅಲೇಕಳ, ಶಾಕೀರ್ ಮುಕಚ್ಚೇರಿ, ತೌಹೀದ್ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0