ಗುರುಪುರ ಕೈಕಂಬ ರಾಷ್ಟ್ರೀಯ ಹೆದ್ದಾರಿ-66 ಸರ್ವಿಸ್ ರಸ್ತೆಯಲ್ಲಿ NHAI ದುರಾವಸ್ಥೆ - ಕೂಡಲೇ ಸರಿಪಡಿಸಿ, ಇಲ್ಲದಿದ್ದರೆ ಉಗ್ರ ಹೋರಾಟ

Jun 5, 2026 - 14:51
Jun 5, 2026 - 14:51
 0  603
ಗುರುಪುರ ಕೈಕಂಬ ರಾಷ್ಟ್ರೀಯ ಹೆದ್ದಾರಿ-66 ಸರ್ವಿಸ್ ರಸ್ತೆಯಲ್ಲಿ NHAI ದುರಾವಸ್ಥೆ - ಕೂಡಲೇ ಸರಿಪಡಿಸಿ, ಇಲ್ಲದಿದ್ದರೆ ಉಗ್ರ ಹೋರಾಟ

ಮಂಗಳೂರು: ಗುರುಪುರ ಕೈಕಂಬ ಪರಿಸರದ ರಾಷ್ಟ್ರೀಯ ಹೆದ್ದಾರಿ-66 ರ ಸರ್ವಿಸ್ ರಸ್ತೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಉಂಟಾಗಿರುವ ಕೃತಕ ನೆರೆ ಪರಿಸ್ಥಿತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಸಂಪೂರ್ಣ ಬೇಜವಾಬ್ದಾರಿ ಮತ್ತು ದೂರದೃಷ್ಟಿಯಿಲ್ಲದ ಕಾಮಗಾರಿಯಿಂದಾಗಿ ಇಂದು ಸಾವಿರಾರು ನಾಗರಿಕರು, ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

*ವಾಸ್ತವ ಸ್ಥಿತಿ:*  
ಇಂದು ಸುರಿದ ಸಾಧಾರಣ ಮಳೆಗೆ ಗುರುಪುರ ಕೈಕಂಬದ ಸರ್ವಿಸ್ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡು ಕೆರೆಯಂತಾಗಿದೆ. ಕೆಂಪು ಮಿಶ್ರಿತ ಮಳೆ ನೀರು ರಸ್ತೆಯಲ್ಲಿ 2-3 ಅಡಿಗಳಷ್ಟು ನಿಂತು, ವಾಹನಗಳು ಅರ್ಧ ಮುಳುಗಿ ಸಂಚರಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿದ್ದಾರೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.

*NHAI ವೈಫಲ್ಯಕ್ಕೆ ಕಾರಣಗಳು:*  
1. *ಅವೈಜ್ಞಾನಿಕ ಕಾಮಗಾರಿ*: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬೃಹತ್ ರಿಟೈನಿಂಗ್ ವಾಲ್ ನಿರ್ಮಿಸಿರುವ NHAI, ಮಳೆ ನೀರು ಸರಾಗವಾಗಿ ಹರಿದು ಹೋಗಲು ವೈಜ್ಞಾನಿಕ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ.
2. *ಚರಂಡಿ ಮುಚ್ಚುವಿಕೆ*: ಹೆದ್ದಾರಿ ಕಾಮಗಾರಿ ವೇಳೆ ಇರುವ ನೈಸರ್ಗಿಕ ನೀರಿನ ಹರಿವನ್ನು ತಡೆದು, ಪರ್ಯಾಯ ವ್ಯವಸ್ಥೆ ಮಾಡದೆ ಕೈತೊಳೆದುಕೊಂಡಿದೆ.
3. *ನಿರ್ವಹಣೆ ಇಲ್ಲ*: ಮಳೆಗಾಲ ಮುನ್ನ ಚರಂಡಿ ಸ್ವಚ್ಛತೆ, ಹೂಳೆತ್ತುವ ಕೆಲಸವನ್ನು NHAI ಮಾಡಿಲ್ಲ. ಇದರಿಂದ ಇಡೀ ಪ್ರದೇಶ ಕೃತಕ ನೆರೆಯಿಂದ ತತ್ತರಿಸಿದೆ.
4. *ಜನರ ಗೋಳು ಕೇಳುವವರಿಲ್ಲ*: ಸ್ಥಳೀಯರು ಹಲವು ಬಾರಿ ದೂರು ನೀಡಿದರೂ NHAI ಅಧಿಕಾರಿಗಳು ಕ್ಯಾರೆ ಎಂದಿಲ್ಲ.

*ನಮ್ಮ ಆಗ್ರಹಗಳು:*  
1. ಗುರುಪುರ ಕೈಕಂಬ ಸರ್ವಿಸ್ ರಸ್ತೆಯ ಜಲಾವೃತ ಸಮಸ್ಯೆಯನ್ನು *48 ಗಂಟೆಯೊಳಗೆ ತಾತ್ಕಾಲಿಕವಾಗಿ* ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
2. *15 ದಿನಗಳೊಳಗೆ ಶಾಶ್ವತ ಪರಿಹಾರ* ಕಲ್ಪಿಸಿ, ವೈಜ್ಞಾನಿಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕು. ತಜ್ಞರ ತಂಡದಿಂದ ಸ್ಥಳ ಪರಿಶೀಲನೆ ನಡೆಸಬೇಕು.
3. ಈ ಅವೈಜ್ಞಾನಿಕ ಕಾಮಗಾರಿಗೆ ಕಾರಣರಾದ NHAI ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ *ಶಿಸ್ತು ಕ್ರಮ* ಜರುಗಿಸಬೇಕು.
4. ನೆರೆ ನೀರಿನಿಂದ ನಷ್ಟ ಅನುಭವಿಸಿದ ಅಂಗಡಿ ಮಾಲೀಕರು, ನಾಗರಿಕರಿಗೆ *ಸೂಕ್ತ ಪರಿಹಾರ* ನೀಡಬೇಕು.

*ಎಚ್ಚರಿಕೆ:*  
ಮೇಲಿನ ಆಗ್ರಹಗಳನ್ನು NHAI ಕೂಡಲೇ ಈಡೇರಿಸದಿದ್ದರೆ, SDPI  ವತಿಯಿಂದ ಗುರುಪುರ ಕೈಕಂಬದಲ್ಲಿ *ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ* ನಡೆಸಲಾಗುವುದು. 

*ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ನಾವು ಸಹಿಸುವುದಿಲ್ಲ. ಇದು ಅಭಿವೃದ್ಧಿ ಅಲ್ಲ, ಜನರ ಪಾಲಿನ ಶಾಪ.*

ವಂದನೆಗಳೊಂದಿಗೆ,  
*ಉಸ್ಮಾನ್ ಗುರುಪುರ*  
*ಅಧ್ಯಕ್ಷರು*  
*SDPI ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ*  


#NHAI, #MORTHIndia, #DCDK

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0