ಜೂನ್ 5ರಂದು ತೊಕ್ಕೋಟಿನಲ್ಲಿ SDPI ಕಾರ್ಯಕರ್ತರ ಮಹಾ ಸಮಾವೇಶ

Jun 4, 2026 - 21:48
 0  128
ಜೂನ್ 5ರಂದು ತೊಕ್ಕೋಟಿನಲ್ಲಿ SDPI ಕಾರ್ಯಕರ್ತರ ಮಹಾ ಸಮಾವೇಶ

SDPI ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ದಿನಾಂಕ 5/06/2026 ರಂದು ಸಮಯ ಸಂಜೆ 7 ಗಂಟೆಗೆ ತೊಕ್ಕೋಟು ಯುನಿಟಿ ಸಭಾಂಗಣದಲ್ಲಿ ಕ್ಷೇತ್ರ ಅಧ್ಯಕ್ಷರಾದ ಝಾಹೀದ್ ಮಲಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಹಾಗೂ ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ  ನಿಸಾರ್ ಮರವೂರು, ಜಿಲ್ಲಾ ಸಮಿತಿ ಸದಸ್ಯರುಗಳಾದ ಅಕ್ಬರ್ ರಾಝಾ, ಶಾಹುಲ್ ಹಮೀದ್ ಕಾಶಿಪಟ್ನ , ನಝೀರ್ ಪುದು, ಮೂಸಬ್ಬ ತುಂಬೆ ಅತಿಥಿಗಳಾಗಿ
ಭಾಗವಹಿಸಲಿಕಿದ್ದಾರೆ ,  ಎಂದು ಎಸ್.ಡಿ.ಪಿ.ಐ ಮಂಗಳೂರು ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0