ಕರ್ನಾಟಕ ರಕ್ಷಣಾ ವೇದಿಕೆ ದ.ಕ ಜಿಲ್ಲೆ ವತಿಯಿಂದ ಮಕ್ಕಳಿಗೆ ಅನ್ನದಾನ
ಮಂಗಳೂರು
ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಅನ್ನದಾನ ನಡೆಯಿತು
*ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ನಾಡ ಸೇನಾನಿ, ಸಮರ ಸಿಂಹ ಟಿ.ಎ ನಾರಾಯಣ ಗೌಡರ 60 ನೇ ವರ್ಷದ ಜನ್ಮದಿನದ ಸಂಭ್ರಮದ ಪ್ರಯುಕ್ತ ಕರವೇ ರಾಜ್ಯ ಕಾರ್ಯದರ್ಶಿಗಳು,ಯುವ ನಾಯಕರಾದ ಮೌಶಿರ್ ಸಾಮಣಿಗೆ ರವರ ನೇತೃತ್ವದಲ್ಲಿ ಮಂಗಳೂರು ಬೋಂದೆಲ್ ನಲ್ಲಿರುವ ಸ್ನೇಹ ದೀಪ HIV ರೋಗಿ ಮಕ್ಕಳ ಆಶ್ರಯ ಕೇಂದ್ರದಲ್ಲಿ ಜೂನ್ 10 ಸಂಜೆ 6 ಗಂಟೆಗೆ ಭೇಟಿ ನೀಡಿ ಅನ್ನದಾನ ಮತ್ತು ಹಣ್ಣು ಹಂಪಲು ಪಾನಿಯ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಕರವೇ ಯುವ ಘಟಕದ ಜಿಲ್ಲಾ ಮುಖಂಡರಾದ ರಾಝಿಕ್ ಆತೂರ್ , UT's ಸೋಶಿಯಲ್ ಕ್ಲಬ್ ರಾಜಾಧ್ಯಕ್ಷ ನಝಿರ್ ಬಾರ್ಲಿ, ಹಾಗು ಹಿರಿಯರಾದ ಲತೀಪ್ ದೇರಳಕಟ್ಟೆ ಕರವೇ ಮುಖಂಡರುಗಳಾದ ಸಿರಾಜ್ ಅಭಯ, ಆರ್.ಕೆ ರಿಯಾಝ್ ಮೈಸೂರ್, ಅಲಿ ಮೋನು ಉಳ್ಳಾಲ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ನೇಹ ದೀಪ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ತಬಸ್ಸುಮ್ ರವರು ನಾರಾಯಣ ಗೌಡರಿಗೆ ಶುಭ ಹಾರೈಸುವುದರೊಂದಿಗೆ ಮಕ್ಕಳ ಜೊತೆ ರಾತ್ರಿಯ ವಿಶೇಷ ಕಾರ್ಯಕ್ರಮ ಆಯೊಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
